Wednesday, January 25, 2017

ಪೆದ್ದು ಫಣಿ 7 (ಇಷ್ಟ)

ನಾವ್ ಇಷ್ಟಪಡೋವ್ರು ನಮ್ಮನ ಇಷ್ಟ ಪಡಲ್ಲ, ನಮ್ಮನ ಇಷ್ಟ ಪಡೋವ್ರನ್ನ ನಾವ್ ಇಷ್ಟ ಪಡಲ್ಲ

Friday, January 20, 2017

ಪೆದ್ದು ಫಣಿ 6 (ನೆಡಿಯೋ ಕಾಲು)

ನೆಡಿಯೋ ಕಾಲು ಎಡುವೊದು ಸಹಜ ಅಂತೆ,
ಹಾಗಂತ, ದುಡಿಯೋ ಕೈ ಕುಡಿಯೋದು ಸಹಜ ಆಗಬಾರದು ಆಲ್ಲವೇ??

ಪೆದ್ದು ಫಣಿ 5 (ಪೆಟ್ಟು)

ಮೊನ್ನೆ ಒಂದ್ಸಲ ಬಸ್ಸ್ ನಲ್ಲಿ ಹೋಗ್ತಿರಬೇಕಾದ್ರೆ ಯಾರೋ ಒಬ್ಬ ಸುಂದರ ಯುವತಿ ನನ್ನ ಮೇಲೆ ಬಿದ್ದ್ಬಿಟ್ಟರು, ಪಾಪ ಸೌಜನ್ಯಕ್ಕೆ ಪೆಟ್ಟಾಯ್ತಾ ಅಂತ ಕೇಳಿದ್ರು.  ನಾನು "ಏನೋ ಗೊತ್ತಾಗಲಿಲ್ಲ ಇನ್ನೊಂದ್ಸಲ ಬಿದ್ದನೋಡಿ, ಹೇಳ್ತೀನಿ" ಅಂದೆ, ಅದಕ್ಕೆ ಕಪಾಳಮೋಕ್ಷ ಮಾಡೋದೇ.... ಆಗ ತುಂಬಾ ಪೆಟ್ಟಾಯ್ತು... 

Wednesday, January 18, 2017

ಪೆದ್ದು ಫಣಿ 4 (ಮಾಯೆ)

Facebook ಮಾಯೆ ಎಂಬರು,
Facebook ಮಾಯೆಯಲ್ಲ,
Whatsapp ಮಾಯೆ ಎಂಬರು,
Whatsapp ಮಾಯೆಯಲ್ಲ,
Twitter ಮಾಯೆ ಎಂಬರು,
Twitter ಮಾಯೆಯಲ್ಲ,
ಅಲ್ಲಿ ಬರುವ likes, comments, shareಗಳೇ ಮಾಯೆ ಕಾಣ ಮಿತ್ರೇಶ್ವರ

ಪೆದ್ದು ಫಣಿ 3 (cash less)

ವೆಂಕ : ಲೋ ಫಣಿ, ATM ನಲ್ಲಿ cashಯೇ ಸಿಗ್ತಿಲ್ಲ ಕಣೋ
ಪಿ ಪಿ : ಹೌದೆ!!!
ವೆಂಕ : ಜೀವನ ಕಷ್ಟ ಆಗ್ಬಿಟ್ಟಿದೆ ಕಣೋ...
ಪಿ ಪಿ : ಅಯ್ಯೋ ಪಾಪ..
ವೆಂಕ : ನೀನ್ ಎನ್ ಮಾಡ್ಕೊಂಡಿದ್ದಿಯ ಇದಕ್ಕೆ ವ್ಯವಸ್ಥೆ
ಪಿ ಪಿ: ನೋಡ್ ವೆಂಕ, ಹೆಂಡತಿ ಗಂಡಂಗೆ ಬೈಯ್ಯೊದು ಯಾರ್ ಹತ್ರಾನು ಹೇಳ್ಕೊಬಾರ್ದು,  ಹಾಗೆ, ಈಗ ಇರೋ ವ್ಯವಸ್ಥೆ ಎಷ್ಟೇ ಕಷ್ಟ ಆದ್ರು ಹೇಳ್ಕೊಬಾರ್ದು

ಪೆದ್ದು ಫಣಿ 2 (Traffic)

ನಡುರಾತ್ರಿ, ಸುಮಾರು 11:30 ರ ಸಮಯ, ಯಾರು ಇಲ್ಲದ ನಗರದ ಖಾಲಿ ರಸ್ತೆ,

ಕಾರಿನಲ್ಲಿ ಬರುತ್ತಿದ್ದ ನಮ್ಮ ಪಿಪಿ, ತಟ್ ಎಂದು ನಿಲ್ಲಿಸಿದ ಕಾರನ್ನು,

ನೊಡಿದರೆ Red Signal ಬಿದ್ದಿತ್ತು,

ತಾನೆ ಮಹಾ ನಿಷ್ಟಾವಂತನಂತೆ ಬೀಗಿದ,

ಮೂರು ದಿನದ ತರುವಾಯ ಮನೆಗೆ NOTICE ಬಂತು,

Traffic Violation: Stopping at Pedestrian Crossing or Crossing Stop Line

ರಚನೆ: ಫಣಿ

ಪೆದ್ದು ಫಣಿ 1 (ಜಪ)

ಅಪ್ಪ: ಲೋ ಫಣಿ, ಏನೋ ಮಾಡ್ತಾ ಇದ್ಯಾ
ಪಿ ಪಿ: ಜಪಾ ಮಾಡ್ತಾ ಇದ್ದೀನಿ ಅಪ್ಪ
ಅಪ್ಪ : ಜಪ ಮಣಿ ಎಲ್ಲೋ
ಪಿ ಪಿ: ಜಪ ಮಣಿ ಯಾಕಪ್ಪಾ, Tv remote control ಕೈನಲ್ಲೇ ಇದ್ಯಲ್ಲ, button ಒತ್ತಿದಾಗೆಲ್ಲ 'ರಾಮ ರಾಮ' ಅಂದರೆ ಸಾಕು, ಗಂಟೆಗೆ ಸಹಸ್ತ್ರ ನಮಾವಳಿ ಆಗುತ್ತೆ