ಕಾಲ ಚಕ್ರವೆಂಬ ಗಾಲಿಗೆ ಸಿಲುಕಿಹ ಗಾಣದ ಎತ್ತು ನಾ,
ಕಾಲದೊಂದಿಗೆ ತಿರುಗಿ ತಿರುಗಿ ಬಳಲಿ ಬೆಂಡಾಗಿಹೆ ನಾ,
ಬಾಲ್ಯವೆಂಬ ಮುಂಜಾನೆಯ ಹುರುಪು,
ಬಿರು ಬಿಸಿಲ ಮಧ್ಯಾಹ್ನಕೆ ಸೋತು ಸೊರಗಿದೆ,
ಸಂಧ್ಯಾ ಕಾಲದ ತಂಪಿಗೆ ಕಣ್ ಪಶ್ಚಿಮ ನೋಡುತಿದೆ,
ಇಹ ಲೋಕದ ಸೂತ್ರಧಾರ ಬಿಡುಗಡೆಗೈದಲ್ಲಿ,
ಭಾವ ಲೋಕದ ಕೊಟ್ಟಿಗೆಗೆ ಓಡುವ ತವಕ,
ಶಾಶ್ವತವಲ್ಲ ಈ ಕೊಟ್ಟಿಗೆ, ಮಾಡಿ ಮಿಕ್ಕ ಕರ್ಮವಿದೆ,
ಮತ್ತೊಂದು ಹೊಸ ದಿನ, ಹೊಸ ಹುರುಪು, ಕರ್ಮದ ಪಯಣ
ಕಾಲದೊಂದಿಗೆ ತಿರುಗಿ ತಿರುಗಿ ಬಳಲಿ ಬೆಂಡಾಗಿಹೆ ನಾ,
ಬಾಲ್ಯವೆಂಬ ಮುಂಜಾನೆಯ ಹುರುಪು,
ಬಿರು ಬಿಸಿಲ ಮಧ್ಯಾಹ್ನಕೆ ಸೋತು ಸೊರಗಿದೆ,
ಸಂಧ್ಯಾ ಕಾಲದ ತಂಪಿಗೆ ಕಣ್ ಪಶ್ಚಿಮ ನೋಡುತಿದೆ,
ಇಹ ಲೋಕದ ಸೂತ್ರಧಾರ ಬಿಡುಗಡೆಗೈದಲ್ಲಿ,
ಭಾವ ಲೋಕದ ಕೊಟ್ಟಿಗೆಗೆ ಓಡುವ ತವಕ,
ಶಾಶ್ವತವಲ್ಲ ಈ ಕೊಟ್ಟಿಗೆ, ಮಾಡಿ ಮಿಕ್ಕ ಕರ್ಮವಿದೆ,
ಮತ್ತೊಂದು ಹೊಸ ದಿನ, ಹೊಸ ಹುರುಪು, ಕರ್ಮದ ಪಯಣ