ನಾ ಚೋರನಲ್ಲದೆ ಮತ್ಯಾರು,
ಬರೆವ ಪ್ರೇರಣೆ ಕೊಡುವವ ಅವನು,
ಬರೆಯಲು ಬುದ್ದಿ ಕೊಡುವವ ಅವನು,
ಬರೆದೊಡನೆ ಸಹಿ ಹಾಕುವೆ ನನ್ನ ಹೆಸರನ್ನು,
ನಾ ಚೋರನಲ್ಲದೆ ಮತ್ಯಾರು...
ಬರೆವುದಾದರು ಏನ...
ನೆಲ, ಜಲ, ಹೂ, ಬಳ್ಳಿ, ಜನ, ಮನ...
ಯಾವುದು ನನ್ನದಲ್ಲದ್ದು,
ಕಂಡದ್ದನ್ನು ಕಂಡಂತೆ ಅಚ್ಚು ಇಳಿಸಿದವನು,
ಅಚ್ಚು ಇಳಿಸಿ ನನ್ನ ಹೆಸರು ಸೇರಿಸಿದವನು,
ನಾ ಚೋರನಲ್ಲದೆ ಮತ್ಯಾರು...
ಚೋರ ಕದ್ದದ್ದನ್ನು ಮಾರುವ ಹಣಕೆ,
ಹೊಟ್ಟೆ ಪಾಡಿಗೆ,
ನಾ ಕದ್ದುದಾದರು ಏತಕೆ?
ಸ್ಥಾನಕೆ? ಮಾನಕೆ? ಅಭಿಮಾನಕೆ?
ನಾ ಚೋರನಲ್ಲದೆ ಮತ್ಯಾರು...
ಬರೆವ ಪ್ರೇರಣೆ ಕೊಡುವವ ಅವನು,
ಬರೆಯಲು ಬುದ್ದಿ ಕೊಡುವವ ಅವನು,
ಬರೆದೊಡನೆ ಸಹಿ ಹಾಕುವೆ ನನ್ನ ಹೆಸರನ್ನು,
ನಾ ಚೋರನಲ್ಲದೆ ಮತ್ಯಾರು...
ಬರೆವುದಾದರು ಏನ...
ನೆಲ, ಜಲ, ಹೂ, ಬಳ್ಳಿ, ಜನ, ಮನ...
ಯಾವುದು ನನ್ನದಲ್ಲದ್ದು,
ಕಂಡದ್ದನ್ನು ಕಂಡಂತೆ ಅಚ್ಚು ಇಳಿಸಿದವನು,
ಅಚ್ಚು ಇಳಿಸಿ ನನ್ನ ಹೆಸರು ಸೇರಿಸಿದವನು,
ನಾ ಚೋರನಲ್ಲದೆ ಮತ್ಯಾರು...
ಚೋರ ಕದ್ದದ್ದನ್ನು ಮಾರುವ ಹಣಕೆ,
ಹೊಟ್ಟೆ ಪಾಡಿಗೆ,
ನಾ ಕದ್ದುದಾದರು ಏತಕೆ?
ಸ್ಥಾನಕೆ? ಮಾನಕೆ? ಅಭಿಮಾನಕೆ?
ನಾ ಚೋರನಲ್ಲದೆ ಮತ್ಯಾರು...