Tuesday, September 14, 2021

ಪೆದ್ದು ಫಣಿ - 12

 ವೆಂಕ: ಏನ್ ಪಿಪಿ,  ನೀನು ಡುಂಡಿರಾಜ್ ತರ ಬರ್ಯಕ್ 

          ಹೊಂಟಿದ್ಯ... ನೀನ್ ಯಾವ ರಾಜ್ ಆಗ್ಬೇಕು 

          ಅಂತ...

ಪಿಪಿ: ಅವರು ಡುಂಡಿರಾಜ್, ನಾನು ಕೊಂಡಿ ರಾಜ್... 

        ಅವರು ತೋರಿಸಿದ ದಾರಿಲಿ ಒಂದು ಸಣ್ಣ ಕೊಂಡಿ 

        ಹಿಡಿದು ಹೊರಟೆ.. ಮುಂದೆ ಎಷ್ಟೋ ಬಂಡಿ ರಾಜ್ 

        ಬರಬಹುದು... ಬಂಡಿ ಗಟ್ಟಲೆ ಬರೆದು ಮುಂದೆ 

        ಸಾಗಲು.

ಪೆದ್ದು ಫಣಿ-11

 ವೆಂಕ: ಲೋ ಪಿ.ಪಿ, 'ಋಣಾನು ಬಂದೇನ ಪಶು, ಪತ್ನಿ,            

          ಸುತ, ಆಲಯ', ಇದನ್ನ ಸಾಮಾನ್ಯವಾಗಿ ಜನ

          ಹೇಳುವಾಗ 'ಪಶುಪತ್ನಿ' ಮತ್ತೆ 'ಸುತಾಲಯ' ಅಂತ

          ಜೋಡಿಸಿ ಹೇಳ್ತಾರಲ್ಲ ಯಾಕೆ???

ಪಿ.ಪಿ: ಸಿಂಪಲ್ ಕಣೋ

          ಪಶುಪತ್ನಿ, ಸಮಾನಾರ್ಥಕ ಪದ

          ಸುತಾಲಯ, ತಂದೆ ಸುತನಿಗೆ ಮಾಡುವ 

          ಆಲಯ...