Friday, December 9, 2022

ಬೇಕೆಂಬ ವಿಷ

 

ಬೇಕು ಎಂಬುದು ವಿಷವಲ್ಲದೆ ಮತ್ತೇನು?
ಬೇಕು ಎಂಬುದು ಮದಿರೆಯ ಮತ್ತೇನು!
ಬೇಕು ಎಂಬದೆ ದೊರೆವುದೆರಡೇ, ಹುಟ್ಟು-ಸಾವು
ಈ ಎರಡರ ನಡುವೆ ಬೇಕುಗಳು ಹಲವು.

ಕೀಟ-ಮಂಡೂಕ-ಸರ್ಪ-ಗರುಡ ಸರಪಳಿ,
ಒಂದು ಬೇಕುವಿನ ಬೆನ್ನಿಗೆ ಹಲವು ಬೇಕುಗಳು ಸಾಲಲಿ,
ನಿಲ್ಲದ ಓಟ, ಇಲ್ಲದುದರ ಹುಡುಕಾಟ,
ಇದು ಬೇಕೆಂಬ ವಿಷ ಪ್ರಾಶನದ ಕಾಟ.

ಬನ್ನಿ ನಿಲ್ಲೋಣ ಒಂದರೆಗಳಿಗೆ,
ಬೇಡವಂ ಅಪ್ಪೋಣ ಬಯಕೆಗಳಿಗೆ,
ಬೇಕೆಂಬುದು ವಿಷ, ಕಿಸೆಗೆ-ಮನಸ್ಸಿಗೆ,
ಅಂತೆಯೇ ನೆಲಕೆ, ಜಲಕೆ ಒಟ್ಟಾರೆ ಧರೆಗೆ.

ಪುಸ್ತಕ

ಮರೆತಿರುವೆನು ಓದುವುದನ ಪುಸ್ತಕ,

ಜ್ಞಾನಾಹರವಿಲ್ಲದೆ ಬಡವಾಗಿದೆ ಮಸ್ತಕ,

ಕಳೆದುಹೋದ ದಿನಗಳ ನೆನೆದು ಭಾವುಕ,

ಘತವೈಭವ ಮರುಕಲಿಸಬಹುದೇ ಸಖ-ಪುಸ್ತಕ...

Thursday, February 17, 2022

ಹಾಲು ಕರೆಯುವ

ಹಾಲ ಕರೆವ ಬನ್ನಿರಿ, ಶುದ್ಧ ಹಸುವಿನ...

ಅಂತಿಂತ ಹಸುವಲ್ಲ, ಲಕ್ಷ್ಮಿ ಸ್ವರೂಪ...

ಹಲವು ಹೆಸರುಂಟು, ಧರಿತ್ರಿ ಎಂಬರು,

ಹಾಲ ಕರೆಯುವ, ಕರೆದು ಕುಡಿಯುವ,

ಕುಡಿದು ತೇಗುವ, ಉಳಿದದ್ದ ಮಾರುವ.


ಸಹನೆಗೆ ಸಾಟಿ ಇಲ್ಲ, ಕರೆದಷ್ಟು ಬರುತಿಹುದಲ್ಲ,

ಕರೆವ ಹಾಲು ಹಗಲಿರುಳು, ಶಕ್ತಿಮೀರಿ,

ರಕ್ತ ಬರಲೇನು, ಕೆಚ್ಚಲೂ ಬಿಡದ ಹಾಗೆ...

ಕುಬೇರನ ಕೊಳ್ಳುವ, ಇಂದ್ರ ಲೋಕವ ಸೃಷ್ಟಿಸುವ,

ಹಾಲ ಕರೆಯುವ, ಹಾಲಹಲವ ಉಗುಳುವ...

ಹಸಿರು - ಉಸಿರು

 ಹಸಿರಿಲ್ಲದೆ ಉಸಿರಿಲ್ಲವೆಂಬುದು ತಿಳಿದ ಸತ್ಯ,

ಸತ್ಯ ಸರ್ವ ಕಾಲಕ್ಕೂ ಕಹಿ-ಅಪತ್ಯ,

ಹಸಿರಿಗೆ ಹೊಣೆ ಹೊರುವವರ್ಯಾರಿಲ್ಲ,

ಉಸಿರುಸಿರಿಗೂ ಅದರ ಬೆಲೆ ತಿಳಿದಿಲ್ಲ,

ಪ್ರಸ್ತುತ, ಹಸಿರು-ಉಸಿರು ಇದ್ದರೆಷ್ಟು ಬಿಟ್ಟರೆಷ್ಟು,

ಎಲ್ಲರ ಗಮನ ಅಕೊಂಟ್ ನಲ್ಲಿ ಬ್ಯಾಲೆನ್ಸ್ ಎಷ್ಟು...