ಬೇಕು ಎಂಬುದು ವಿಷವಲ್ಲದೆ ಮತ್ತೇನು?
ಬೇಕು ಎಂಬುದು ಮದಿರೆಯ ಮತ್ತೇನು!
ಬೇಕು ಎಂಬದೆ ದೊರೆವುದೆರಡೇ, ಹುಟ್ಟು-ಸಾವು
ಈ ಎರಡರ ನಡುವೆ ಬೇಕುಗಳು ಹಲವು.
ಕೀಟ-ಮಂಡೂಕ-ಸರ್ಪ-ಗರುಡ ಸರಪಳಿ,
ಒಂದು ಬೇಕುವಿನ ಬೆನ್ನಿಗೆ ಹಲವು ಬೇಕುಗಳು ಸಾಲಲಿ,
ನಿಲ್ಲದ ಓಟ, ಇಲ್ಲದುದರ ಹುಡುಕಾಟ,
ಇದು ಬೇಕೆಂಬ ವಿಷ ಪ್ರಾಶನದ ಕಾಟ.
ಬನ್ನಿ ನಿಲ್ಲೋಣ ಒಂದರೆಗಳಿಗೆ,
ಬೇಡವಂ ಅಪ್ಪೋಣ ಬಯಕೆಗಳಿಗೆ,
ಬೇಕೆಂಬುದು ವಿಷ, ಕಿಸೆಗೆ-ಮನಸ್ಸಿಗೆ,
ಅಂತೆಯೇ ನೆಲಕೆ, ಜಲಕೆ ಒಟ್ಟಾರೆ ಧರೆಗೆ.