Friday, November 17, 2023

ಪೆದ್ದು ಫಣಿ - 13

 ಮಾಣಿ: ಏನ್ ಬೇಕ್ ಸಾರ್

ಫಣಿ : ಒಂದು ಇಡ್ಲಿ ವಡೆ, ಒಂದು ಮಸಾಲೆ ದೋಸೆ ಕೊಡಪ್ಪ

ವೆಂಕ : ಫಣಿ, ಮಸಾಲೆ ತೋಗೊಳೋ, ಇಲ್ಲಿ ತುಂಬಾ ಚೆನ್ನಾಗಿರುತ್ತೆ

ಫಣಿ : ಬೇಡ ಕಣೋ, ಸಿಕ್ಕಾಪಟ್ಟೆ ಎಣ್ಣೆ ಹಾಕಿರ್ತಾರೆ

ವೆಂಕ: ಮತ್ತೆ ವಡೆ ಹೇಳಿದ್ಯ, ಅದಕ್ಕೇನು ಎಣ್ಣೆ ಹಾಕಿರಲ್ಲವ

ಫಣಿ: ವಡೆಗೆ ಎಣ್ಣೆ ಎಲ್ಲೋ ಹಾಕಿರ್ತಾರೆ, ಎಣ್ಣೆಗೆ ವಡೆ ಹಾಕ್ತಾರೆ... ಅದು ಪರ್ವಾಗಿಲ್ಲ ಬಿಡು...