Sunday, February 16, 2025

ಮೋಹದ ಮೊಬೈಲೇ

 ಮೋಹದ ಮೊಬೈಲೇ...

ರಡೂ ಕಣ್ಣು ಸದಾ ನಿನ್ನ ಮೇಲೆ,

ಕೈಕೋಳ, ಸರಪಣಿ ಏನೂ ಬೇಡ,

ನೀ ಇದ್ದರೆ ಸಾಕಷ್ಟೆ, ನಿನ್ನಂತೆಯೇ ನಾನು ಜಡ,

ಕುಂತಲ್ಲೇ ಕಟ್ಟಿಹಾಕುವೆ,

ಕೆಲಸದಲ್ಲಿದ್ದರೂ ಸೆಳೆವೆ, 

ನಿದ್ರಿಸಲು ಬಿಡೆ,

ಕನಸಲ್ಲೂ ನಿನ್ನ ಅಡೆತಡೆ,

ಊಟಕ್ಕೆ ಉಪ್ಪಿನಕಾಯಿ ರುಚಿಸುತ್ತಿಲ್ಲ,

ಎಲ್ಲಾ ರುಚಿಯ ನೀ ಕಸಿದು ಕಬಳಿಸಿದೆಯಲ್ಲ,

ಆಟಕ್ಕೆ ಹೋಗಲು ನೀನೆ ಆಟಿಕೆ ಆಗಿಹೆ,

ನನ್ನ ಜೀವನದಲ್ಲಿ ನೀ ಆಟವಾಡುತಿಹೆ,

ದೃಷ್ಟಿ ಬತ್ತಿದೆ ನಿನ್ನ ನೋಡಿ ನೋಡಿ,

ಬುದ್ಧಿ ಕೆಟ್ಟಿದೆ ನಿನ್ನ ಸಹವಾಸ ಮಾಡಿ,

ನಿನ್ನ ದೂರಮಾಡಲು ನನಗೆ ಎರಡೇ ಕ್ಷಣ,

ಕೊಡು ನನಗೆ ಆ ಎರಡು ಕ್ಷಣ...

ಬಿಟ್ಟು ಬಿಡುವೆ ನಿನ್ನ ನಾ...

ಮೋಹದ ಮೊಬೈಲೇ...


ರಚನೆ

ಫಣಿ