ಮಾಯೆ
ಮೀಟಿದಾಗ
ಮಾಯೆ ಮೀಟಿದೆ, ಮೊಬ್ಬು ಆವರಿಸಿದೆ,
ಅರಿವಿಲ್ಲದೆ ಜೇವನದ ಆಟ ನೆಡೆದಿದೆ,
ತಿಳಿದು ಒಮ್ಮೆ ಆಡಿದ ಆಟ,
ತಿಳಿಯದೇ ಆಡಿದ್ದು ಹಲವು,
ಮೊಬ್ಬು ಮುಸುಕುವುದು, ಮಾಯೆ ಮೀಟಿದೊಡೆ.
ವಿಧಿ ಲಿಖಿತ, ಪೂರ್ವಾಪರ ಖರ್ಮ ಫಲ,
ಇ೦ದು ಆಡಿದ ಆಟಕೆ, ಇನ್ನೇ೦ದೋ ಫಲ,
ಅ೦ದೆ೦ದೋ ಆಡಿದ ಆಟಕೆ, ಇ೦ದು ಕನ್ನಡಿ,
ಮಾಯೆ ಮೀಟಿದೊಡೆ, ಮಾಯಾಲೊಕದ ಸೃಷ್ಟಿ,
ಮರು
ಗಳಿಗೆಯೇ ಮುದುಡಿದ ವೈರಾಗ್ಯ,
ಮುಸುಕು
ಸಡಲಿ, ಬೆಳಕು ಆವರಿಸಿದೊಡೆ,
ಘನ
ಘೋರ ಪಾಪದ ಹೊರೆ,
ಬುದ್ದಿಯ
ಕಸಿದ ಮಾಯೆಗೆ ನಾ ಸೆರೆ,
ಪಾರು
ಮಾಡು ನಾರಾಯಣ, ನಿನ್ನ ನಾಮವೇ ಆಸರೆ.
No comments:
Post a Comment