ಇತ್ತೀಚಿನ ದಿನಗಳಲ್ಲಿ ಗ್ರಂಥಾಲಯಕ್ಕೆ ಹೋಗುವ ಹವ್ಯಾಸ ಬೆಳೆಸಿಕೊಳ್ಳುತ್ತಿದ್ದೇನೆ. ಓದುವ ಕಾಲದಲ್ಲಿ ಓದಲಿಲ್ಲವಾದರೂ, ಓದಲು ಕಾಲಮಿತಿ ಇಲ್ಲವೆಂದು ಅರಿವು ಅದ್ಯಾವ ಬೋಧಿ ವೃಕ್ಷದ ಅಡಿಯಲ್ಲಿ ಇದ್ದಾಗ ಆಯಿತೋ ನಾ ಅರಿಯೆ. ನಾನು, ನನ್ನ ಸ್ವಂತ ಹೆಂಡತಿಯೊಂದಿಗೆ ಗ್ರಂಥಾಲಯಕ್ಕೆ ವಾರಕ್ಕೊಮ್ಮೆ ಭೇಟಿ ನೀಡುತ್ತಿದ್ದೇನೆ. ಆಕೆಗೆ ಓದಲು ಬಹಳ ಇಷ್ಟ. ನನಗು ಇಷ್ಟ, ಆದರೆ ಓದಲು ಕಷ್ಟ, ಏಕೆಂದರೇ.... ಓದುವ ಕಾಲದಲ್ಲಿ........ "Yes"... ಓದಲಿಲ್ಲ. ನಾನು 10 ಪುಟ ಓದುವ ಸಮಯದಲ್ಲಿ ನನ್ನಾಕೆ 100 ಪುಟದ ಪುಸ್ತಕ ಓದಿ ಮುಗಿಸಿರುತ್ತಾಳೆ. ನಾನು ಗ್ರಂಥಾಲಯಕ್ಕೆ ಹೋದಕೂಡಲೆ ನನ್ನ ಮನಸ್ಸು ಸೂರೆ ಮಾಡುವುದು ಅಲ್ಲಿನ ಪುಸ್ತಕಗಳ ಸುವಾಸನೆ. ಅದರ ಅನುಭವ ನೀವು ಗ್ರಂಥಾಲಯಕ್ಕೆ ಹೋಗಿಯೇ ಆಸ್ವಾದಿಸಬೇಕು. ಯಾವುದೇ ಹೋಟೆಲ್ ಗೆ ಹೋದರು ಮಸಾಲೆ ದೋಸೆ ಹೇಗೆ ಘಮ ಘಮಿಸುತ್ತದೋ, ಅದೇ ರೀತಿ, ಎಲ್ಲಾ ಗ್ರಂಥಾಲಯದ ವಾಸನೆಯು ಒಂದೆ. ನಾನು ಗೌರೀಬಿದನೂರಿನಲ್ಲಿ ಇದ್ದಾಗ ಗ್ರಂಥಾಲಯ ಒಂದು ದ್ವೀಪದಂತೆ ಮಾರುಕಟ್ಟೆ ಮದ್ಯೆ ಇತ್ತು. ಆದಾಗ್ಯೂ, ಗ್ರಂಥಾಲಯದ ಸುವಾಸನೆ ಪಸರಿಸುತ್ತಿದ್ದದ್ದು ಸೋಜಿಗ.
"ಸಗಣಿ ಜೊತೆಗಿನ ಸರಸಕ್ಕಿಂತ, ಗಂಧದ ಜೊತೆಗಿನ ಗುದ್ದಾಟವೇ ಲೇಸು" ಎಂಬಂತೆ - ಮಾರಕ ಟಿ.ವಿ, ಮೊಬೈಲು, ಇಂಟರ್ನೆಟ್ ಇತ್ಯಾದಿಗಳ ಸರಸಕ್ಕಿಂತ, ಗ್ರಂಥಾಲಯದ ಒಡನಾಟ, ಅಲ್ಲಿ ಬರುವ ಜ್ಞಾನ ದಾಹಿ ಭಕ್ತರ ನೋಡಿ - ಹೂವಿನ ಜೊತೆ ನಾರು ಸ್ವರ್ಗ ಸೇರಿದಂತೆ, ನನ್ನನ್ನು ಯಾವುದಾದರು ಧಡ ಸೇರಿಸುವುದೋ ಎಂಬ ಆಶಾಭಾವನೆ. ಇಂದಿನ ಈ ತಂತ್ರಜ್ಞಾನ ನಮ್ಮ ಮಾನವ ಸಂಕುಲವ ಎಲ್ಲಿಗೆ ಕರೆದೊಯ್ಯುವುದೋ ಕಾಣೆ! ಬೇಕಿದ್ದೋ, ಬೇಡವಾದ್ದೋ ತುರುಕುವ ಸಾಮಾಜಿಕ "ಜಾಲ" ತಾಣಗಳು. ಬೆರಳಂಚಿನಲ್ಲಿ ದೊರಕುವ ಮಾಹಿತಿ ನಮ್ಮ ಮೆದುಳನ್ನು ನಿದ್ರಿಸಲು ಬಿಟ್ಟು ತಮ್ಮ ಕಾರ್ಯ ಸಾಧನೆಗೆ ಸುಖದ ಸೋಪಾನವೇರಿದೆ. AI, Artificial Intelligence ಕಾಲ ಇದು. ಹೆಚ್ಚು ಬುದ್ಧಿ ಇರುವ ಮನುಷ್ಯರು ಸೇರಿ, ಮನುಷ್ಯರ ಬುದ್ದಿ ನಿಷ್ಕ್ರಿಯಗೊಳಿಸಿ, ಒಂದು ಯಂತ್ರ ಆ ಕಾರ್ಯಗಳನ್ನು ಮಾಡುವ ವಿಧಾನ. ಇದು ಹೀಗೆ ಮುಂದುವರೆದರೆ Darwin Theory ಪ್ರಕಾರ ಮುಂದೆ ಹುಟ್ಟುವ ಯಾವ ಮಕ್ಕಳಿಗೂ ಬುದ್ಧಿಯೇ ಇಲ್ಲವಾದಂತೆ ಹುಟ್ಟುವುದೇ? ಪ್ರಪಂಚದಲ್ಲಿ 84 ಲಕ್ಷ ಜೀವ ರಾಶಿಗಳಿವೆಯಂತೆ. 83,99,999 ಜೀವಿಗಳಿಗೆ ಇಲ್ಲವಾದ ಬುದ್ಧಿ ಕ್ಷಮತೆಯನ್ನು ಆ ದೇವರು ಮಾನವ ಜೀವಿಗೆ ಕೊಟ್ಟ ವರ ಇಂದು ಶಾಪವಾಗುತ್ತಿದೆಯೇ? ಇಂಥ ಗೊಂದಲದ ನಡುವೆ ಮುಂದಿನ ಪೀಳಿಗೆಗೆ ಅಳಿಲು ಸೇವೆ ಸಲ್ಲಿಸಲು ಗ್ರಂಥಾಲಯಕ್ಕೆ ಮೊರೆ ಹೋಗುತ್ತಿರುವೆ. ಏಕೆಂದರೆ, ನಮ್ಮ ಚಿಣ್ಣರು ನಮ್ಮ ಮಾತು ಕೇಳುವುದಕ್ಕಿಂತ ನಾವು ಮಾಡುವುದನ್ನು ಅನುಸರಿಸುವುದೇ ಹೆಚ್ಚು.
ಗ್ರಂಥಾಲಯದ ಒಳಗೆ ಪ್ರವೇಶಿಸಿದಂತೆ ಸಾವಿರಾರು ಪುಸ್ತಕಗಳ ನಡುವೆ ಯಾವುದನ್ನ ಓದುವುದು ಎಂಬ ಯಕ್ಷ ಪ್ರಶ್ನೆ. ಏಕೆಂದರೆ, ಗುರು, ಗುರಿ ಎರಡು ಇಲ್ಲದ ಹಾದಿಯಾಗಿದೆ. ಕೈಗೆ ಸಿಕ್ಕ ಪುಸ್ತಕವ ತಂದು ಓದಲಾರಂಭಿಸಿದೆ. "ಆನೋ ಭಧ್ರ ಕರ್ತಾವೋ ಯಂತು ವಿಶ್ವತಃ" ಋಗ್ವೇದದ ಈ ವಾಕ್ಯದಂತೆ ಒಳ್ಳೆಯ ವಿಚಾರ ಎಲ್ಲಾ ದಿಕ್ಕಿನಿಂದಲೂ ಪಸರಿಸಲಿ - "Let the noble thought come from all directions". ಮೊದಲು ಓದುವ ಹವ್ಯಾಸ ಮೂಡಿಸಿಕೊಳ್ಳುವ ತೆರದಲಿ. ಆ ಪುಸ್ತಕದ ವಾಸನೆಯ ಜಾಡು ಹಿಡಿಯುತ... ಆ ಜ್ಞಾನದ ವಾಸನೆಯ ಪಡೆಯಲಿಚ್ಚಿಸುತ...
ಹೋಗುವ ಬನ್ನಿ ಗ್ರಂಥಾಲಯಕೆ... ಜ್ಞಾನ ದೇವಾಲಯಕೆ...