Friday, October 27, 2017

ಗೊಂದಲ

ಗೊಂದಲ

ನಿಂತ ಬರವಣಿಗೆ ನನ್ನದು,
ಗೊಂದಲಕೆ ಸಿಲುಕಿಹ ಭಾವನೆಗಳಲ್ಲಿ.

ಗೊಂದಲದ ಗೂಡು ಈ ಜಗತ್ತು,
ಎದೆಯಾಳದಲಿ ಕುರುಕ್ಷೇತ್ರ,
ಮನ ಅಶ್ವ ಎತ್ತೆತ್ತಲೋ ಸಾಗಲು,
ಹಲವು ಕೃಷ್ಣ ಸಾರಥಿ ದೊರಕಾರು...
ಹೇಳದ್ದು ಮಾಡದವರು!!!
ತೊರೆ ತೊರೆ ಎಂದದ್ದೇ ಹಿಡಿವ ಹುಚ್ಚರು,
ಆ ಹುಚ್ಚರೇ ಜಗದ ಅಚ್ಚು ಮೆಚ್ಚಿನವರು,
ಮನ ಒಲಿಸಲು ಮಾಡುವ ಕಸರತ್ತು,
ಮುಖವಾಡವ ಬದಲಿಸುವ ಪ್ರತಿ ಹೊತ್ತು,
ಕಾಮ ಕ್ರೋದ ಲೋಭಗಳ ಕುಣಿತ,
ಸಾತ್ವಿಕತೆ ಮುದುಡಿ ಮಲಗಿದೆ ಮಣಿಯುತ,
ನೆನ್ನೆಯ ಸರಿಯೇ ಇಂದಿನ ತಪ್ಪು,
ಇಂದಿನ ತಪ್ಪು, ನಾಳೆಯಾ ಸರಿ...

ಗೊಂದಲಕೆ ಸಿಲುಕಿಹೆ ಮನ,
ಬರವಣಿಗೆ ನಿಲ್ಲಿಸಲೇ ನಾ!!!
 

No comments:

Post a Comment