ಕರುನಾಡ ಕರ್ಣ
ಕನ್ನಡಿಗರು ನಾವು ಕರ್ಣನಂತೆ ಎನ್ನಬಹುದೇ ,
ಎಂದೋಡೆ, ಕರುನಾಡಿಗೆ ಕನ್ನಡವೇ ಕರ್ಣ ಕುಂಡಲ ಅಲ್ಲವೇ,
ಕರ್ಣನ ಹುಟ್ಟು ಕ್ಷಾತ್ರವಿರಬಹುದು, ಅಪರಿಚಿತನಾಗಿ ಬೆಳಿಯಲಿಲ್ಲವೇ!
ಶ್ರೀಮಂತ ನಮ್ಮ ಕನ್ನಡ, ಜಗಕೆ ಅಪರಿಚಿತವಾಗಿ ಉಳಿದಿಲ್ಲವೇ!
ಆ ಕರ್ಣ, ದುಂಬಿಯ ಕೊರೆತಕೆ ನೋವು ಉಣಲಿಲ್ಲವೇ,
ಕನ್ನಡಿಗರು ನಾವು, ಪರ ಭಾಷೆಯ ಧಾಳಿಗೆ ಮರುಗುತಿಲ್ಲವೇ,
ಕರ್ಣನ ಧೀರ ಶೌರ್ಯಕೆ ಎಲ್ಲೆಲ್ಲೂ ಮನ್ನಣೆ,
ಅಂತೆಯೇ ಕನ್ನಡ ಸಾಹಿತ್ಯಕೆ ಹಲವು ಜ್ಞಾನ ಪೀಠ,
ಯುದ್ಧದಲ್ಲಿ ಕಲಿತ ವಿದ್ಯೆ ಮರೆಯುವ ಶಾಪ ಕರ್ಣಗೆ,
ಈ ಯುಗದಲ್ಲಿ ಯಾರ ಶಾಪ ಕನ್ನಡ ಮರಿಯುತ್ತಿರುವ ಕನ್ನಡಿಗರಿಗೆ!
ಅವಸಾನವಾದ ಕರ್ಣ ತನ್ನ ಎದೆಯಾಳದ ಕುಂಡಲವ ಬಗೆಯುತಲಿ,
ಕರುನಾಡು ಕಾಣದಿರಲಿ ಇಂಥ ಧುರಂತ, ಕನ್ನಡಾಭಿಮಾನದ ಅಮೃತ ಕವಚ ಕಳಚದಿರಲಿ...