ವರ್ಷ ಉರುಳಿತು
ವರ್ಷ ಹೊಸತು, ಹೊಸತನವಿಲ್ಲದಿದ್ದರೇನು ಸೊಗಸು,
ಅದೇ ಗಾಳಿ, ಮಳೆ, ಸೂರ್ಯ ಚಂದ್ರರು,
ನವ ಚೈತನ್ಯವಿಲ್ಲದಿರೆ ಏನು ಸೊಗಸು,
ಅದೇ ಹಬ್ಬ, ದಿಬ್ಬಣ, ಉರು ತೇರುಗಳೆಲ್ಲ,
ಸಂಬ್ರಮ ಸಡಗರವಿಲ್ಲದಿರೆ ಏನು ಸೊಗಸು,
ಉಡುಗೆ ತೊಡಿಗೆ ನವ ನವೀನ,
ಮನ ಮುಪ್ಪಾದೊಡೆ ಏನು ಸೊಗಸು,
ಜನ್ಮ ತೊರೆದು, ಜನ್ಮ ತೊಡಲು,
ಮಾನವೀಯತೆ ಮೆರೆಯದಿರೆ ಎನಿತು ಸೊಗಸು,
ವರ್ಷವೇ ಉರುಳಲಿ, ಯುಗವೇ ಉರುಳಲಿ,
ಮಾನವೀಯತೆಯೊಂದಿದ್ದರೆ ಸೊಗಸೋ ಸೊಗಸು...