Wednesday, November 20, 2013

ನಾ ಚಿಕ್ಕವ

ನಾ ಚಿಕ್ಕವ, ನಾ ಚಿಕ್ಕವ,


ದೊಡ್ಡವರ ಪ್ರಪಂಚದಲ್ಲಿ, ನಾ ಚಿಕ್ಕವ,

ಬುದ್ದಿ ಕೊಟ್ಟ ಭಗವಂತ,

ಅವನೇ ನಾ ಎನ್ನುವ, ನಾ ಚಿಕ್ಕವ,

ರೂಪ ಕೊಟ್ಟ ಭಗವಂತ,

ಕುರೂಪಕ್ಕೆ ಕಣ್ಣುಗೊಡದ ಮನ, ನಾ ಚಿಕ್ಕವ,

ಹೊನ್ನ ಕೊಟ್ಟ ಭಗವಂತ,

ಹೊನ್ನ ಮೋಡಿಗೆ ವ್ಯಾಘ್ರ ನಾಗಿಹೆ, ನಾ ಚಿಕ್ಕವ,

ಕಿರುತಿ ಕೊಟ್ಟ ಭಗವಂತ,

ನೆಲ ಮುಟ್ಟದ ಕಾಲು ನನ್ನದು, ನಾ ಚಿಕ್ಕವ,

ಜಾಗ ಕೊಟ್ಟ ಭಗವಂತ,

ಮಿತಿ ಮೀರಿ ಕಬಳಿಸಿಹೆ ನಾ, ನಾ ಚಿಕ್ಕವ,

ಮನುಕುಲವ ಸೃಷ್ಟಿಸಿದ ಭಗವಂತ,

ಮೋಹ ಪಾಶಕ್ಕೆ ಸಿಲುಕಿ ಮನುಕುಲವ ನಶಿಸುತ್ತಿರುವ “ನಾ”

ನಾ ಚಿಕ್ಕವ, ನಾ ಚಿಕ್ಕವ,

No comments:

Post a Comment