Thursday, November 21, 2013

ಕವಿತೆ ಬರೆಯುವೆ ನಾ ಇಂದು

ಕವಿತೆ ಬರೆಯುವೆ ನಾ ಇಂದು


ಟೊಂಕ ಕಟ್ಟಿಹೆ ಇಂದು ಕವಿತೆ ಬರೆಯಲೆಂದು,
ಯತ್ನಿಸಿರಲಿಲ್ಲ ಈ ಸಹಸವ ಹಿಂದೆಂದು!
ಭಾವನೆಗೆ ಪದ ಜೋಡಿಸಿ-ಕವಿತೆ ಮೂಡಿಸುವುದು ಸಹಜ,
ನಿರ್ಭವನೆಯಲ್ಲಿನ ಹೀಗೊಂದು ಪ್ರಯತ್ನ ಕಸರತ್ತೆ ನಿಜ!
ಇತಿಶ್ರೀಯ ಸ್ಥಿತಿಯಿಂದ ಶ್ರೀಕಾರದ ಪ್ರಯತ್ನ,
ಕೊಂಡೊಯ್ಯುವುದೇ ಅನಂತಕ್ಕೆ ಎನ್ನ!
ಕವನ ಬರೆಯುವುದು ಎನ್ನಾಸೆಗಲ್ಲ,
ಕವನ ನನ್ನ ಆಸರೆ, ಜೀವ, ಸಕಲ,
ಕವನ ಬರೆವುದಕೆ ಕಾರಣ ಬೇಕಿಲ್ಲ,
ಬರೆದೊಡನೆ ಹೊಮ್ಮುವ ಆನಂದಕ್ಕೆ ಎಣೆಯಿಲ್ಲ,
ಟೊಂಕ ಕಟಿ ಬರೆದೆ ಕವಿತೆಯೊಂದ ಇಂದು,
ಕ್ಷಮಿಸಿ ತಪ್ಪಿದ್ದಲ್ಲಿ ನಿಮ್ಮ ಕಂದನೆಂದು.

No comments:

Post a Comment